ನಿವೃತ್ತ ಇಂಜಿನಿಯರ್ ಮರುಳಸಿದ್ಧಪ್ಪ ನಿಧನ
ಬೆಂಗಳೂರು: ನಿವೃತ್ತ ಎಕ್ಸಿಕ್ಯುಟಿವ್ ಇಂಜಿನಿಯರ್ ಮರುಳಸಿದ್ದಪ್ಪ (80) ಅವರು ಬೆಂಗಳೂರು ರಾಜಾರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಭಾನುವಾರ ರಾತ್ರಿ ಕೊನೆಯುಸಿರೆಳೆದರು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಹಾದಿಕೆರೆ ಗ್ರಾಮದವರಾದ ಮುರುಳಸಿದ್ದಪ್ಪ, ಮಹಾರಾಷ್ಟ್ರ ಸರ್ಕಾರದಲ್ಲಿ ಎಂಜಿನಿಯರ್ ಹುದ್ದೆ ಕೆಲಸಕ್ಕೆ ಸೇರಿ ಮೂರು ದಶಕಗಳ ಕಾಲ ಕೆಲಸ ಮಾಡಿದ್ದರು. ರಾಜ್ಯಕ್ಕೆ ಮರಳಿದ ಮೇಲೆ ಎಂಜಿನಿಯರ್ ಸಂಘ ಮಾಡಿ ಅನೇಕ ಸೇವಾ ಸೌಲಭ್ಯ ಕೊಡಿಸಲು ಸರ್ಕಾರದ ಗಮನ ಸೆಳೆದಿದ್ದರು.
ಮಕ್ಕಳಾದ ಜಿಸಿಎಂ ಪ್ರಸಾದ್ ಮತ್ತು ಡಾ.ಜಿಸಿಎಂ ಪ್ರದೀಪ್ (ರಾಮಯ್ಯ ಆಸ್ಪತ್ರೆ), ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅವರು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಬೆಂಗಳೂರಿನ ಕನ್ನಹಳ್ಳಿ ರುದ್ರಭೂಮಿಯಲ್ಲಿ ಸೋಮವಾರ ಮಧ್ಯಾಹ್ನ ನಡೆಯಲಿದೆ.
ಸಂತಾಪ:
ಕ್ರಿಯಾಶೀಲ ಮತ್ತು ಪ್ರಾಮಾಣಿಕವಾಗಿ ದಕ್ಷತೆಯಿಂದ ಕೆಲಸ ಮಾಡಿದ್ದ ಇಂಜಿನಿಯರ್ ಮರುಳಸಿದ್ದಪ್ಪ ನಿಧನಕ್ಕೆ ಮಹಾರಾಷ್ಟ್ರ ಎಂಜಿನಿಯರ್ ಅಸೋಸಿಯೇಷನ್, ಕರ್ನಾಟಕ ನಿವೃತ್ತ ಇಂಜಿನಿಯರ್ ಅಸೋಸಿಯೇಷನ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.