ಮೋಕಾ ಚಂಡಮಾರುತ ಇಂದು ಒಡಿಶಾಗೆ ಅಪ್ಪಳಿಸಲಿದ್ದು, ಅದರ ಪ್ರಭಾವ ಸಾಕಷ್ಟು ರಾಜ್ಯಗಳ ಮೇಲಾಗಲಿದೆ ಅದರಲ್ಲಿ ಕರ್ನಾಟಕ ಕೂಡ ಒಂದು. ಕರಾವಳಿಯ ಎಲ್ಲಾ ಜಿಲ್ಲೆಗಳು, ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಧರ್ಮಸ್ಥಳ, ಕಾರವಾರ, ಬಸವನಬಾಗೇವಾಡಿ, ಯಡವಾಡ, ದಾವಣಗೆರೆ, ಹಳಿಯಾಳ, ಕುಂದಾಪುರ, ಪುತ್ತೂರು, ಕಾರ್ಕಳ, ಸುತಗಟ್ಟಿ ಮತ್ತಿಕೊಪ್ಪ, ಮುಂಡರಗಿ, ಭಾಗಮಂಡಲ, ಕದ್ರಾ, ಕಿರವತ್ತಿ, ಸಿದ್ದಾಪುರ, ಅಕ್ಕಿಆಲೂರು, ಹಿಡಕಲ್ ಅಣೆಕಟ್ಟು, ಗದಗ, ಇಂಡಿ, ಕೊಟ್ಟಿಗೆಹಾರ, ಪೊನ್ನಂಪೇಟೆ, ಮೂರ್ನಾಡು, ಸರಗೂರಿನಲ್ಲಿ ಮಳೆಯಾಗಲಿದೆ.
ಗುರುವಾರ ಸಂಜೆ ಬೆಂಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ, ಬಿರುಗಾಳಿ ಸಹಿತ ಮಳೆಯಾಗಿತ್ತು. ಇಂದು ಕೂಡ ಕರಾವಳಿಯ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ, ಎಚ್ಎಎಲ್ನಲ್ಲಿ 33.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 33.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 33.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.