ಬೆಂಗಳೂರು: ಬೆಂಕಿ ಪ್ರತಿಬಂಧಕ ಗುಣಗಳುಳ್ಳ, ಕಡಿಮೆ ಹೊಗೆ ಹೊರಸೂಸುವ “ಲೋ ಸ್ಮೋಕ್ ಫಾಗ್ ಕೇಬಲ್ “ಗಳನ್ನು ಉಷಾ ಕೇಬಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಎಫ್.ಆರ್.ಎಲ್.ಎಸ್ ಮತ್ತು ಎಚ್.ಆರ್.ಎಫ್.ಆರ್ ಕೇಬಲ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಉಷಾ ಕೇಬಲ್ ಗ್ರೂಪ್ ನಿರ್ದೇಶಕ ಅಮಾನ್ ಗುಪ್ತಾ ಮಾತನಾಡಿ, ಗುಣಮಟ್ಟ ಸಂಸ್ಥೆ ಐ.ಎಸ್.ಐ ಸಂಸ್ಥೆ ಉತ್ತಮ ಗುಣಮಟ್ಟದ ಕೇಬಲ್ ಗಳನ್ನು ಉತ್ಪಾದಿಸುವಂತೆ ನೀಡಿದ ನಿರ್ದೇಶನವನ್ನು ಪಾಲಿಸುತ್ತಿದ್ದು, ಈ ಕೇಬಲ್ ಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿವೆ. ವಸತಿ ಸಂಕೀರ್ಣಗಳು, ಮಾಲ್ ಗಳು, ಕಚೇರಿಗಳಲ್ಲಿ ಅಗ್ನಿ ಅವಘಡಗಳು ಪ್ರಮುಖ ಸವಾಲಾಗಿದ್ದು, ಇವುಗಳಿಂದ ಪ್ರತಿಬಂಧಕ ಶಕ್ತಿ ಹೊಂದಿರುವ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಗೃಹ ಬಳಕೆಗೂ ಈ ಕೇಬಲ್ ಗಳು ಸೂಕ್ತವಾಗಿದೆ. ಗೃಹ, ಕೃಷಿ ವಲಯದಿಂದಲೂ ಹೊಸ ತಲೆಮಾರಿನ ಕೇಬಲ್ ಗಳಿಗೆ ಉತ್ತಮ ಸ್ಪಂದನೆ ದೊರೆತಿದೆ ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕದಿಂದ ಮಾರುಕಟ್ಟೆ ಆರ್ಥಿಕ ಹಿಂಜರಿತ ಎದುರಿಸಿದ್ದು, ಇದೀಗ ಚೇತರಿಸಿಕೊಂಡಿದೆ.ಕಳೆದ ವರ್ಷಾಂತ್ಯದಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಪ್ರಸಕ್ತ ವರ್ಷದಲ್ಲೂ ಮಾರುಕಟ್ಟೆಯಲ್ಲಿ ಉತ್ತಮ ಆರಂಭ ದೊರೆತಿದೆ ಎಂದು ತಿಳಿಸಿದರು.