Tuesday, June 6, 2023
Homeಇದೀಗ ಬಂದ ತಾಜಾ ಸುದ್ದಿಮೈಸೂರು ರಮಾನಂದರ ಹೆಜ್ಜೆಗೆಜ್ಜೆ ತಂಡದಿಂದ ಮತದಾನ ಜಾಗೃತಿ ಬೀದಿನಾಟಕ ಪ್ರದರ್ಶನ

ಮೈಸೂರು ರಮಾನಂದರ ಹೆಜ್ಜೆಗೆಜ್ಜೆ ತಂಡದಿಂದ ಮತದಾನ ಜಾಗೃತಿ ಬೀದಿನಾಟಕ ಪ್ರದರ್ಶನ

ರಂಗಭೂಮಿಯಲ್ಲಿ ಮೂರನೆ ರಂಗಭೂಮಿ ಎಂದು ಕರೆಸಿಕೊಳ್ಳುವ ಬೀದಿನಾಟಕಗಳು, ಜನ
ಇರುವ ಇರುವಲ್ಲಿಗೆ ಹೋಗಿ ಆಯಾ ದಿನದ, ತಿಂಗಳ, ವರ್ಷದ ಹರ್ಷದ ಹರ್ಷದ ಕಥಾಹಂದರವನ್ನು
ಪ್ರಕ್ಷಕ ಪ್ರಭುಗಳಿಗೆ ಹಾಸ್ಯದ ಮುಖೇನ ತಿಳಿಸುತ್ತ ಪ್ರಸ್ತುತ ಸನ್ನಿವೇಶವನ್ನು ವಿಡಂಬನಾತ್ಮಕವಾಗಿ ಹಾಸ್ಯ
ಮುಖೇನ ಹಬರಲ್ಲಿ ಚಿಂತನೆಯ ಕಿಡಿ ಹಚ್ಚಿಸುವ ಜನವಪರ ರಂಗಭೂಮಿ ಬಡಜನರ ರಂಗ
ವೇದಿಕೆಯೇ ಈ ಬೀದಿನಾಟಕ ರಂಗವಾಗಿದೆ.
ಬೀದಿನಾಟಕಗಳೆಂದರೆ ಪ್ರತಿಭಟನೆ ಬೀಜಗಳು. ಅನ್ಯಾಯದ ವಿರುದ್ಧ ಸಿಡಿದೇಳುವಂತೆ ಮಾಡಿ,
ಜಾಗೇತಿಯನ್ನು ಮೂಡಿಸುವ ಮೂಲಕ ಜನತೆಗೆ ಸಾಮಾಜಿಕ ನ್ಯಾಂi ವನ್ನು ಒದಗಿಸುತ್ತಾ, ಸತ್ಯz
ಹಾದಿಯನ್ನು ತೋರುವ ನಿಜವಾದ ಜನಪರ ಕಾಳಜಿಯುಳ್ಳ, ಶೋಷಣೆಯ ವಿರುದ್ಧ ಬಂಡಾಯ ಮಾಡು
ಮಾನವನ ಹಕ್ಕಿಗಾಗಿ ರೈತರ, ಎಲ್ಲ ವರ್ಗದ ಕಾರ್ಮಿಕರ ಹಿತಾಸಕ್ತಿಯ ಸಲುವಾಗಿ ದೇಶದ
ಆಗುಹೋಗುಗಳಾದ ಅರಾಜಕತೆ, ಲಂಚ, ವರದಕ್ಷಿಣೆ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ ಇತ್ಯಾದಿಗ
ವಿರುದ್ಧ ಜನರಪರವಾಗಿ ಧ್ವನಿ ಎತ್ತಿ, ತಿಳಿಹೇಳುವ ನ್ಯಾಯದ ಪರ ನಿಲ್ಲುವಂತೆ ಪ್ರೇರೇಪಿಸುವ ಅತ್ಯದ್ಭುತ
ಮಾಂತ್ರಿಕ ಶಕ್ತಿ ಈ ಬೀದಿನಾಟಕಗಳಿಗಿವೆ. ಆನರಿಂದ ಕಜವರಿಗಾಗಿ ದೇಶ ಭಕ್ತರ, ಜನಸೇವೆಯ ನಿಜವಾದ
ಕಾಳಜಿಯುಳ್ಳ ಹೃದಯವಂತ ಕಲಾವಿದರ, ಸಾಹಿತಿಗ ಹಾಗೂ ವಿವಿಧ ಕ್ಷೇತ್ರದ ಗಣ್ಯಾತಿವರೇಣ್ಯರುಗಳಿಂದ
ಕಟ್ಟಿಕೊಂಡಂತಹ ಜನಪರ ರಂಗಭೂಮಿ ಈ ಬೀದಿ ನಾಟಕ ರಂಗಭೂಮಿಯನ್ನು “ಬಡವರ ರಂಗಭೂಮಿ”
ಎಂದರೆ ತಪ್ಪಾಗಲಾರದು.
ಮನರಂಜನೆಯನ್ನು ನೀಡುತ್ತಾ ಚಿಂತನೆಗೂ ಚಾಲನೆಯನ್ನು ನೀಡುವ ಬೀದಿನಾಟಕಗಳು
ಅನಕ್ಷರಸ್ಥರಿಗೂ, ಅಕ್ಷರಸ್ಥರಿಗೂ ತಿಳಿಯುವಂತೆ ಬೀದಿ ಬದಿಯಲ್ಲೇ ನಿಂತ ನೆಲವನ್ನೇ ರಂಗಭೂಮಿಯನ್ನಾಗಿ
ಪರಿವರ್ತಿಸಿ ಶ್ರವಣ ಮಾಧ್ಯಮದಿಂದ ದೃಶಯಮಾಧ್ಯಮದವರೆಗೂ ಪ್ರವಹಿಸಿ ಸುತ್ತಲೂ ನೆರದಿರವ ಎಲ್ಲಾ
ಬಗೆಯ ಪ್ರಕ್ಷಕರಿಗೂ ಸತ್ಯಾಸತ್ಯತೆಯನ್ನು ಹಾಸ್ಯದ ಲೇಪನ ಹಚ್ಚಿ ಒಂದು ಜಾU ಗೊತ್ತುಮಾಡಿಕೊಂಡು,
ತಮತೆ, ಕಂಜರಾ, ತಾಳಗಳ ಹಿನ್ನೆಯೊಂದಿಗೆ ರಂಗಗೀತೆಗಳನ್ನು ಹಾಡುತ್ತಾ ಕಾಲು ಗಂಟೆ ಅಥವಾ ಮೂವತ್ತು
ನಿಮಿಷದಲ್ಲಿ ನಾಟಕ ಮುಗಿಸಿ ಮರೆಯಗಿ ಬಿಡುತ್ತಾರೆ.
ಹತ್ತಾರು ದಿನಗಳಿಂದ ಭಾರತ ಚುನಾವಣಾ ಆಂi ಗದ ಹಾಗೂ ಬೃಹತ್ ಬೆಂಗಳೂರು
ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರದಲ್ಲಿ “ ಓಟ್ ಹಾಕಿ” ಎಂಬ ಹಾಸ್ಯದ ಜೊತೆ ವಿಡಂಬನೆ
ಮಾಡುತ್ತಾ. ಕಳೆದ ಐದು ದಶಕಗಳಿಂದ ರಂಗಭೂಮಿಯನ್ನೇ ತನ್ನ ಉಸಿರಾಗಿಸಿಕೊಂಡಿರುವ ಹಾಸ್ಯನಟ,
ನಾಟಕಕಾರ, ನಿರ್ದೇಶಕ ಸಂಘಟಕ ಮೈಸೂರು ರಮಾನಂದರ ಸಾರಥ್ಯದ “ಗೆಜ್ಜೆಹೆಜ್ಜೆ” ರಂಗತಂಡವು
ಐವತ್ತಕ್ಕು ಬಡಾವಣೆಗಳಲ್ಲಿ ಸೀರೆ ಸೆರೆ , ಲಿಕ್ಕರು ಕುಕ್ಕರು ತೆಗೆದುಕೊಳ್ಳದೆ, ಯಾವುದೇ
ಪಕ್ಷನೋಡದೆ ಅಭ್ಯರ್ಥಿ ಮಾಡಿರುವ ಜನಪರ ಕೆಲಸಗಳನ್ನು ನೋಡಿ ಮತನೀಡಬೇಕು, ಭಾರತ ಸಂವಿಧಾನ
ನೀಡುರುವ ಮೂಲಭೂತವಾದ ನಮ್ಮ ಹಕ್ಕು. ಎಂದು ಓಟಿನ ಮಹತ್ವ ತಿಳಿಸುವ ವಿಚಾರವನ್ನು ಜನರಿಗೆ
ತಿಳಿಸಿದರು.
ಈ ಸಾಮಾಜಿಕ ಜಾಗೃತಿ ಮೂಡಿಸುವ ಬೀದಿನಾಟಕದ ಪ್ರಮುಖ ಪಾತ್ರ ಪಾತ್ರದಲ್ಲಿ ಮೈಸೂರು
ರಮಾನಂದ್, ಮಂಜೀವ್, ದಿನೇಶ್ ಕನ್ನಡಿಗ. ನಿರ್ದೇಶಕರಾದ ಕಸ್ತೂರಿ ರಂಗನಾಥ್, ನೀನಾಸಂ
ಪದವೀಧರರು, ನಿರ್ದೇಶಕರಾದ ರಂಜಾನ್‌ಸಾಬ್ ಉಳ್ಳಾಗಡ್ಡಿ, ಗೋಪಿ ಕಲಾಕಾರ್, ನಾಗರಾಜ್, ರವಿ ಎಸ್.
ಹೊಸಳ್ಳಿ ವೆಂಕೋಬರಾವ್, ಎಂ. ಶ್ರೀಕಾಂತ ತಾಪ್ರರ್ಣಿ, ಅಮಿತಾನಂದ ಮೊದಲಾದ ಕಲಾವಿದರು
ಉತ್ಸಾಹದಿಂದ ಅಭಿನಯಿಸಿ ಜನರ ಮೆಚ್ಚುಗೆ ಪಡೆದರು.

ಎಂ. ಶ್ರೀಕಾಂತ ತಾಮ್ರಪರ್ಣಿ, ಹೊಸಪೇಟೆ
ಕಲಾವಿದ ಹಾಗೂ ಬರಹಗಾರ

RELATED ARTICLES
- Advertisment -
Google search engine

Most Popular

Recent Comments