ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ರವರ ಪರ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯರವರು ಕಾಮಾಕ್ಷಿಪಾಳ್ಯದಲ್ಲಿ ಮನೆಗಳಿಗೆ ಭೇಟಿ ನೀಡಿ ಪ್ರಚಾರ ಮಾಡಿದರು, ಮಾಜಿ ಶಾಸಕ ನೆ.ಲ.ನರೇಂದ್ರಬಾಬುರವರು ಉಪಸ್ಥಿತರಿದ್ದರು.
ಕೆ.ಗೋಪಾಲಯ್ಯರವರು ಮಾತನಾಡಿ ದೇಶ ಮತ್ತು ರಾಜ್ಯ ಒಳಿತು, ರಕ್ಷಣೆಯಾಗಬೇಕು ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರಬೇಕು.
ಸುರೇಶ್ ಕುಮಾರ್ ರವರ ಸರಳ, ಸಜ್ಜನ ವ್ಯಕ್ತಿ, ಯಾರ ತಂಟೆಗೂ ಗೋಗುವುದಿಲ್ಲ , ಈ ಬಾರಿ ಸುರೇಶ್ ಕುಮಾರ್ ರವರು ಅತ್ಯಧಿಕ ಮತಗಳಿಂದ ಜಯಗಳಿಸುತ್ತಾರೆ.
ಪ್ರಧಾನಿ ನರೇಂದ್ರಮೋದಿರವರಿಗೆ ದೇಶದ ಜನರ ಕುರಿತು ಕಳಕಳಿ ಇದೆ ಎಂದು ಹೇಳಿದರು.
ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಲಾಗಿದೆ, ಮತದಾರರಿಂದ ಬಿಜೆಪಿ ಪರ ಉತ್ತಮ ಸ್ಪಂದನೆ ಇದೆ.
ಪ್ರಧಾನಿ ನರೇಂದ್ರಮೋದಿರವರ 9ವರ್ಷದ ಆಡಳಿತ ಮತ್ತು ರಾಜ್ಯ ಸರ್ಕಾರದ ಉತ್ತಮ ಸಾಧನೆ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿ ಕಾರ್ಯಗಳು ಜನರ ಮನೆ, ಮನ ತಲುಪಿದೆ ಎಂದು ಹೇಳಿದರು.