ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಕೇಶವಮೂರ್ತಿರವರಿಂದ ಬಿರುಸಿನ ಮತಯಾಚನೆ
ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಕೇಶವಮೂರ್ತಿರವರು ಇಂದು ನಂದಿನಿಲೇಔಟ್ ವಾರ್ಡ್ ನಲ್ಲಿ ಮನೆ, ಮನೆ ತೆರಳಿ ಮತಯಾಚನೆ ಮಾಡಿದರು.
ಕಾಂಗ್ರೆಸ್ ಪಕ್ಷದ ಸಾಧನೆಗಳು ಮತ್ತು ಕೇಶವಮೂರ್ತಿರವರು ಎರಡು ಬಾರಿ ಪಾಲಿಕೆ ಸದಸ್ಯರಾಗಿ ಮಾಡಿರುವ ಜನಸೇವೆ ಸಾಧನೆಗಳ ಪುಸ್ತಕಗಳನ್ನು ವಿತರಿಸಿದರು
ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಕುಮಾರ್, ಶಿವಕುಮಾರ್, ಬಾಲಣ್ಣ, ಲೋಕೇಶ್ ಗೌಡರವರು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರುಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಅಭ್ಯರ್ಥಿ ಎಸ್.ಕೇಶವಮೂರ್ತಿರವರು ಮಾತನಾಡಿ ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಡವರು, ಮಧ್ಯಮವರ್ಗದವರು ಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಿದ್ದಾರೆ.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಜನವಿರೋಧಿ ಆಡಳಿತ ಮತ್ತು ಭ್ರಷ್ಟಚಾರದಿಂದ ಇಂದು ಜನರು ಸಂಕಷ್ಟದಲ್ಲಿ ಇದ್ದಾರೆ.
ನಾಡಿನ ಹಿತರಕ್ಷಣೆ, ಒಳಿತಿಗಾಗಿ ಕಾಂಗ್ರೆಸ್ ಪಕ್ಷ ಐದು ಮಹತ್ವಪೂರ್ಣ ಯೋಜನೆಗಳನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.
200ಯೂನಿಟ್ ವಿದ್ಯುತ್, ಗೃಹಿಣಿ 2000ಸಹಾಯಧನ, ನಿರುದ್ಯೋಗ ಭತ್ಯೆ, 10ಕೆ.ಜಿ.ಅಕ್ಕಿ ಉಚಿತ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ.
ಈ ಐದು ಯೋಜನೆಗಳು ನಾಡಿನ ಪ್ರತಿ ಕುಟುಂಬಕ್ಕೆ ತಲುಪುದರಿಂದ ಆರ್ಥಿಕವಾಗಿ ಸಬಲರಾಗಿ ಜೀವನದಲ್ಲಿ ಮುಂದೆ ಬರುತ್ತಾರೆ.
ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಕುರಿತು ಹೆಚ್ಚಿನ ಆದ್ಯತೆ ನೀಡಿ ಭವಿಷ್ಯದ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.