Saturday, June 3, 2023
Homeಇದೀಗ ಬಂದ ತಾಜಾ ಸುದ್ದಿರಾಘವೇಂದ್ರ ಶೆಟ್ಟಿ ಅವರ ಹುಟ್ಟು ಹಬ್ಬ

ರಾಘವೇಂದ್ರ ಶೆಟ್ಟಿ ಅವರ ಹುಟ್ಟು ಹಬ್ಬ

ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಅವರ ಹುಟ್ಟು ಹಬ್ಬವನ್ನು ಅವರ ಸ್ವ ಗೃಹದಲ್ಲಿ ಕುಟುಂಬದವರು ಹಾಗೂ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಜೊತೆ ಆಚರಿಸಲಾಯಿತು.

ಈ ಹುಟ್ಟು ಹಬ್ಬದಲ್ಲಿ ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ರವರು ಪಾಲ್ಗೊಂಡು ರಾಘವೇಂದ್ರ ಶೆಟ್ಟಿ ಅವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಶುಭಾಶಯ ಕೋರಿದರು. ನಂತರ ಮಾತನಾಡಿದ ಸಚಿವರು ಶ್ರೀಯುತ ರಾಘವೇಂದ್ರ ಶೆಟ್ಟಿ ಅವರು ಬಿಜೆಪಿ ಪಕ್ಷದ ಕ್ಷೇತ್ರದ ಮಂಡಲ ಅದ್ಯಕ್ಷರಾಗಿ ಪಕ್ಷವನ್ನು ಸಂಘಟಿಸುವ ಮೂಲಕ ಬಿಜೆಪಿ ಪಕ್ಷ ಬೇರೂರ್ವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ರಾಜಕೀಯದ ಸ್ಥಾನಮಾನಗಳು ಸಿಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ನರೇಂದ್ರಬಾಬು, ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಎಸ್ ಹರೀಶ್ ರೈ, ಬಿಬಿಎಂಪಿ ಮಾಜಿ ಸದಸ್ಯರಾದ ಕೆ ವಿ ರಾಜೇಂದ್ರ ಕುಮಾರ್, ಬಿಜೆಪಿ ಉತ್ತರ ಜಿಲ್ಲಾ ಅಧ್ಯಕ್ಷ ಜಯರಾಮಣ್ಣ, ಮುಖಂಡರುಗಳಾದ ಜಯಸಿಂಹ, ನಿಸರ್ಗ ಜಗದೀಶ್, ಡಿಎಲ್ ನಾಗೇಂದ್ರ, ಸುರಭಿ ನಾಗರಾಜ್,ಶ್ರೀನಿವಾಸ್, ಲೋಕೇಶ್ ನಟ, ನಿರೂಪಕ ಧನಂಜಯ ಗೌಡ ಮಹಿಳಾ ಮುಖಂಡರುಗಳಾದ ಪುಷ್ಪಾ ರಾಜೇಂದ್ರಕುಮಾರ್, ಉಮಾ ಶ್ರೀನಿವಾಸ್ ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments