ಬೆಂಗಳೂರು: ಅಮೆರಿಕದ ಕ್ಯಾಲಿಫೋರ್ನಿಯಾ ಸ್ಯಾನೋಸೆ ನಗರದ ಬಾಲಾಜಿ ಮಠದ ಪೀಠಾಧಿಪತಿ ಶ್ರೀ ನಾರಾಯಣಾನಂದ ಸ್ವಾಮೀಜಿ ಅವರು ಬಸವಜಯಂತಿ ದಿನ ಏಪ್ರಿಲ್ 23ರಂದು ಬೆಂಗಳೂರಿನಲ್ಲಿ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಅವರನ್ನು ಭೇಟಿ ಮಾಡಿ ಸೌಹಾರ್ದ ವಿಚಾರ ವಿನಿಮಯ ನಡೆಸಿದರು.
ಅವರು ನಡೆಸುತ್ತಿರುವ ಜನಜಾಗೃತಿ ಹೋರಾಟ ಹಾಗೂ ಯುವಜನರಿಗೆ ನೀಡುತ್ತಿರುವ ಸಂದೇಶ ಪ್ರಶಂಸಿಸಿ ಕರ್ನಾಟಕ ಭೂಷಣ’ ಪ್ರಶಸ್ತಿಯನ್ನು ನೆನಪಿನ ಕಾಣಿಕೆಯೊಂದಿಗೆ ಪ್ರದಾನ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಆಡಳಿತ ಸುಧಾರಣೆ ಸಲಹಾ ವೇದಿಕೆ ಅಧ್ಯಕ್ಷ ಬಿ.ಹೆಚ್.ಸುರೇಶ್, ಕುವೆಂಪು ಪ್ರಕಾಶ್, ವಕೀಲ ನರೇಂದ್ರ, ಶ್ರೀಮತಿ ಎಂ.ಎಸ್.ಸುಜಾತ ಹಾಗೂ ಶ್ರೀಮತಿ ಕವಿತಾ ಉಪಸ್ಥಿತರಿದ್ದರು.
ಜಸ್ಟೀಸ್ ಸಂತೋಷ್ ಹೆಗ್ಡೆ ಅವರಿಗೆ ‘ ಕರ್ನಾಟಕ ಭೂಷಣ’ ಪ್ರಶಸ್ತಿ ಪ್ರದಾನ
RELATED ARTICLES